ಮೃತದೇಹ ತೆಗೆಯಲು ಜೋಗಕ್ಕೆ ಇಳಿದು ನಂತರ ಕಾಣೆಯಾದ ಜ್ಯೋತಿರಾಜ್ ಯಾನೆ ಕೋತಿರಾಜ್ ,

ಮೃತದೇಹ ಪತ್ತೆಗೆ ಜೋಗ್‌ಫಾಲ್ಸ್‌ಗಿಳಿದ ಜ್ಯೋತಿರಾಜ್ ಯಾನೆ ಕೋತಿರಾಜ್ : ಮೇಲಕ್ಕೆ ಬಾರದೇ ಆತಂಕ ! ಬ್ರೇಕಿಂಗ್ ನ್ಯೂಸ್ ಮಂಗಳೂರು ವರದಿ ಶಿವಮೊಗ್ಗ/ಜೋಗ: ಜೋಗ ಜಲಪಾತದಲ್ಲಿ ಬಿದ್ದಿದ್ದ ಮೃತದೇಹ ಹೊರ ತೆಗೆಯಲು ಜೋಗದ ಗುಂಡಿಗೆ ಬೆಳಗ್ಗೆಯೇ ಇಳಿದ ಜ್ಯೋತಿರಾಜ್ ಕತ್ತಲಾದರೂ ಮೇಲೆ ಬಂದಿಲ್ಲ . ಇದರಿಂದ ಸ್ಥಳೀಯರಲ್ಲಿ ಆತಂಕ ಮೂಡಿದ್ದು ಸಿದ್ದಾಪುರ ಹಾಗೂ ಜೋಗ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಬೆಂಗಳೂರು ಮೂಲದ ಮಂಜುನಾಥ್ ಎಂಬುವರು ಐಷಾರಾಮಿ ಬೈಕ್‌ನಲ್ಲಿ ಇಲ್ಲಿಗೆ ಬಂದಿದ್ದು, ನಂತರ ಡೆತ್‌ನೋಟ್ ಬರೆದಿಟ್ಟು ಜೋಗ್‌ಫಾಲ್ಸ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದರಿಂದ ಸ್ಥಳಕ್ಕೆ ಆ ಯುವಕನ ಕುಟುಂಬದವರು ಆಗಮಿಸಿದ್ದಾರೆ. ಹೀಗಾಗಿ ಯುವಕನ ಶೋಧನೆಗೆ ಜಲಪಾತಕ್ಕಿಳಿದ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಕೂಡ ಈಗ ಸಂಪರ್ಕಕ್ಕೆ ಸಿಗದೇ ಇರುವುದು ಆತಂಕಕ್ಕೆ ಕಾರಣವಾಗಿದೆ.